Sthotras
ಜಯ ಮೃತ್ಯುಂಜಯ
Date : 30-01-2015
ದೇವಗೆ ಪೊಡ ಮಡುವೆ ಮೃತ್ಯುಂಜಯೇಶಗೆ ನಾ ಮಣಿವೆ ಜಯ ಜಯ ಜಯ ಜಯ ಜಯ ಜಯ ಜಯ ಜಯ ಜಯ ಮೃತ್ಯುಂಜಯಗೆ ಲೋಕೋದ್ಧಾರಗೆ ಶರಣವೆಂಬೆ ಭಕ್ತರ ಪೊರೆಯೋ ಎಂದೆಂಬೆ ||ಜಯ|| ದುಃಖವ ನೀಗುತಿರು ಮನಕೆ ನೆಮ್ಮದಿ ನೀಡುತಿರು ||ಜಯ|| ಸುಗುಣವ ಕೊಡು ಇಂದು ಮನುಜಗೆ ಸಮರಸವಿರಲೆಂದು ||ಜಯ|| ಐಕ್ಯತೆ ನಮಗಿರಲಿ ಎಂದಿಗು ಸೌಖ್ಯದ ಬದುಕಿರಲಿ ||ಜಯ|| ಧರ್ಮವು ಹೊಳೆದಿರಲಿ ನಿತ್ಯವು ಕರ್ಮವು ನೆನಪಿರಲಿ ||ಜಯ||
ನಿನ್ನ ನಂಬಿಹೆ ನಾನು
Date : 30-01-2015
ನಿನ್ನ ನಂಬಿಹೆ ನಾನು ಹೇ ಮೃತ್ಯುಂಜಯನೆ ಸನ್ಮಾರ್ಗ ತೋರೋ ಹೇ ರಕ್ಷಕನೆ ||ಪ|| ಭವ ಸಾಗರದ ಸುಖ ದುಃಖದಲೆಗಳಲಿ ತೇಲುತೇರಿಳಿಯತ ಸಾಗೋ ಶಕ್ತಿಯನು ಕೊಡು ಎನಗೆ ಸಂಸಾರ ಸೆರೆಯ ಸಿರಿ ಸಂಪದದ ಈ ಬದುಕ ಸಮ ಭಾವದಿ ಸ್ವೀಕರಿಸಿ ಬಾಳುವ ಮನವೆನಗೆ ನೀಡೋ ಮದ ಮತ್ಸರ ಮೋಹಾದಿ ಇಹ ಬಂಧನದಿ ಎದುರಾಗುವ ತಡೆಗಳನು ಮುದದಿಂದ ಹರಿಸೋ ಹೇ ನೀಲಕಂಠ ಋಣ ರೋಗದಿ ದಾರಿದ್ರ್ಯ ರಾಗ ದ್ವೇಷಗಳಿಂದ ಭಗ್ನವಾಗದೆ ತಪವು ಭಂಗವಾಗದಿರಲೆನ್ನ […]
ಶರಣು ಮೃತ್ಯುಂಜಯೇಶ್ವರ
Date : 30-01-2015
ಶರಣು ಶರಣು ಹೇ ಮೃತ್ಯುಂಜಯೇಶ್ವರ ಭಕ್ತರ ರಕ್ಷಕ ಮೃತ್ಯುಂಜಯ ದು:ಖವ ನೀಗೋ ಹೇ ಭಗವಂತ ದುರಿತವ ಹರಿಸೋ ಪರಶಿವನೆ ಶಿಷ್ಟರ ರಕ್ಷಕ ದುಷ್ಟರ ಶಿಕ್ಷಕ ಇಷ್ಟವ ನೀಡೋ ಹೇ ದೇವ ದೇವ ದೇವ ಹೇ ದೇವ ದೇವ ಹೇ ದೇವ ದೇವ ಹೇ ಮಹದೇವ ಭಾವವು ತುಂಬಿ ಭಜಿಸುವೆವು ಭವ ಸಾಗರ ದಾಟಿಸು ಮುದದಿಂದ ಜಯತು ಜಯತು ಹೇ ಜಯತು ಜಯತು ಹೇ ಜಯತು ಜಯತ ಹೇ ಮೃತ್ಯುಂಜಯ ಜಯ […]
ನಮೋ ಮೃತ್ಯುಂಜಯ
Date : 30-01-2015
ಮೃತ್ಯುಂಜಯ ನಮಸ್ತುಭ್ಯಂ ಮೃತ್ಯುಂ ಹರ ನಮಾಮ್ಯಹಂ | ಸರ್ವ ಮೃತ್ಯು ವಿನಾಶಾಯ ಮೃತ್ಯುಂಜಯ ನಮೋ ನಮಃ1 || ಕೈಲಾಸ ಪತಿಯೆ ಪರಶಿವನೆ ಹಾಲಹಲವುಂಡ ವಿಷಧರನೆ ನಮೋ ನಮೋ ಶ್ರೀ ಮೃತ್ಯುಂಜಯನೆ ನಮೋ ನಮೋ ಹೇ ರಕ್ಷಕನೆ ಗಂಗೆಯ ಧರಿಸಿದ ಗಂಗಾಧರನೆ ನಂದಿಯ ವಾಹಕ ನಂದೀಶನೆ ನಮೋ ನಮೋ ಹೇ ಮೃತ್ಯುಂಜಯನೆ ನಮೋ ನಮೋ ಹೇ ರಕ್ಷಕನೆ ತ್ರಿಶೂಲಧಾರಿ ತ್ರಿನೇತ್ರಿಯ ರುದ್ರತಾಂಡವನೆ ಶಿವ ಶಂಭೋ ನಮೋ ನಮೋ ಹೇ ಮೃತ್ಯುಂಜಯನೆ ನಮೋ ನಮೋ ಹೇ […]
ಶ್ರೀ ಮೃತ್ಯುಂಜಯೇಶ್ವರ
Date : 30-01-2015
ಮೃತ್ಯುಂಜಯನೆ ನೀನೆಮ್ಮ ನಿತ್ಯವು ಕಾಯೋ ಭಗವಂತ ||ಪ|| ಪುತ್ತೂರ ನರಿಮೊಗರಿನಲಿ ಎತ್ತರ ಕ್ಷೇತ್ರದಿ ನೆಲೆನಿಂತು ಸುತ್ತಲ ಹಸಿರಿನ ಉಸಿರಲಿ ಸುತ್ತುತ ಸಲಹೋ ಭಗವಂತ ಪುರಾಣದ ಕಥೆಯು ಇಂತಿಹುದು ಖರಾಸುರನೆಂಬ ದಾನವನು ಹರ ನಿನ್ನನು ಕುರಿತು ತಪಗೈದು ವರವನು ಪಡೆದನು ಮುದದಿಂದ ಮೃತ್ಯುಂಜಯನೆ ನೀನೊಲಿದು ಭೃತ್ಯನ ಹರಸಿದೆ ನೀನಂದು ನೃತ್ಯವನಾಡಿ ನಟರಾಜ ಮೃತ್ಯುಂಜಯ ನೀ ನೆಲೆಯಾದೆ ಹರಸಲು ಹರನು ಕ್ಷಣದಲ್ಲಿ ಧರಿಸುತ ಅಸುರನು ಜಿಹ್ಹೆಯಲ್ಲಿ ಇರಿಸಿದ ಲಿಂಗವ ಭುವಿಯಲ್ಲಿ ಮೆರೆದಿಹ ಕ್ಷೇತ್ರದ […]