Govt. of Karnataka - HR & CE Department
ಕರ್ನಾಟಕ ಸರಕಾರ - ಧಾರ್ಮಿಕ ಧತ್ತಿ ಇಲಾಖೆ
Phone : +91 9480 757 516      Email : info@mrutyunjayeshwaratemple.com

ನಿನ್ನ ನಂಬಿಹೆ ನಾನು

 

ನಿನ್ನ ನಂಬಿಹೆ ನಾನು ಹೇ ಮೃತ್ಯುಂಜಯನೆ

ಸನ್ಮಾರ್ಗ ತೋರೋ ಹೇ ರಕ್ಷಕನೆ       ||ಪ||

 

ಭವ ಸಾಗರದ ಸುಖ ದುಃಖದಲೆಗಳಲಿ

ತೇಲುತೇರಿಳಿಯತ ಸಾಗೋ

ಶಕ್ತಿಯನು ಕೊಡು ಎನಗೆ

 

ಸಂಸಾರ ಸೆರೆಯ ಸಿರಿ ಸಂಪದದ

ಈ ಬದುಕ ಸಮ ಭಾವದಿ

ಸ್ವೀಕರಿಸಿ ಬಾಳುವ ಮನವೆನಗೆ ನೀಡೋ

 

ಮದ ಮತ್ಸರ ಮೋಹಾದಿ ಇಹ ಬಂಧನದಿ

ಎದುರಾಗುವ ತಡೆಗಳನು

ಮುದದಿಂದ ಹರಿಸೋ ಹೇ ನೀಲಕಂಠ

 

ಋಣ ರೋಗದಿ ದಾರಿದ್ರ್ಯ ರಾಗ ದ್ವೇಷಗಳಿಂದ

ಭಗ್ನವಾಗದೆ ತಪವು

ಭಂಗವಾಗದಿರಲೆನ್ನ ನಿತ್ಯ ಸ್ಮರಣೆ

 

ಹುಟ್ಟು ಸಾವುಗಳ ನಿತ್ಯ ಸತ್ಯವನರಿತು

ನಿಷ್ಠೆಯಿಂದಲಿ ದೃಷ್ಟಿ ನಿನ್ನೊಳು ನೆಟ್ಟು

ಇಷ್ಟದಿಂದಲಿ ನಿನ್ನ ಭಜಿಸುವೆನು ನಿರತ

 

ಭಕ್ತ ನನ್ನವನೆಂದು ಸತತ ಕಾಯುತ ದೇವ

ಮುಕ್ತಗೊಳಿಸಿ ಎನ್ನ ಈ ಚಕ್ರದಿಂದ

ಐಕ್ಯನಾಗಿಸು ನಿನ್ನ ದಿವ್ಯ ಪ್ರಭೆಯೊಳಗೆ