Phone : +91 9480 757 516 Email : info@mrutyunjayeshwaratemple.com
ನಮೋ ಮೃತ್ಯುಂಜಯ
ಮೃತ್ಯುಂಜಯ ನಮಸ್ತುಭ್ಯಂ
ಮೃತ್ಯುಂ ಹರ ನಮಾಮ್ಯಹಂ |
ಸರ್ವ ಮೃತ್ಯು ವಿನಾಶಾಯ
ಮೃತ್ಯುಂಜಯ ನಮೋ ನಮಃ1 ||
ಕೈಲಾಸ ಪತಿಯೆ ಪರಶಿವನೆ
ಹಾಲಹಲವುಂಡ ವಿಷಧರನೆ
ನಮೋ ನಮೋ ಶ್ರೀ ಮೃತ್ಯುಂಜಯನೆ
ನಮೋ ನಮೋ ಹೇ ರಕ್ಷಕನೆ
ಗಂಗೆಯ ಧರಿಸಿದ ಗಂಗಾಧರನೆ
ನಂದಿಯ ವಾಹಕ ನಂದೀಶನೆ
ನಮೋ ನಮೋ ಹೇ ಮೃತ್ಯುಂಜಯನೆ
ನಮೋ ನಮೋ ಹೇ ರಕ್ಷಕನೆ
ತ್ರಿಶೂಲಧಾರಿ ತ್ರಿನೇತ್ರಿಯ
ರುದ್ರತಾಂಡವನೆ ಶಿವ ಶಂಭೋ
ನಮೋ ನಮೋ ಹೇ ಮೃತ್ಯುಂಜಯನೆ
ನಮೋ ನಮೋ ಹೇ ರಕ್ಷಕನೆ
ಢಮ ಢಮ ಢಮರುಗವೆನ್ನುತಿರೆ
ಧಿಮಿ ಧಿಮಿ ನರ್ತಿಸು ನಟರಾಜ
ನಮೋ ನಮೋ ಹೇ ಮೃತ್ಯುಂಜಯನೆ
ನಮೋ ನಮೋ ಹೇ ರಕ್ಷಕನೆ
ಜಗದಲಿ ಅಳಿಸೂ ದೌಷ್ಟ್ರ್ಯವನು
ಬಗಯಲಿ ತೋರೋ ಮಹಿಮೆಯನು
ನಮೋ ನಮೋ ಹೇ ಮೃತ್ಯುಂಜಯನೆ
ನಮೋ ನಮೋ ಹೇ ರಕ್ಷಕನೆ
ಶಿಷ್ಟರ ಕಾಯುವ ಹೇದೇವ
ಇಷ್ಟವ ಹರಸೋ ಮಹದೇವ
ನಮೋ ನಮೋ ಹೇ ಮೃತ್ಯುಂಜಯನೆ
ನಮೋ ನಮೋ ಹೇ ರಕ್ಷಕನೆ