Phone : +91 9480 757 516 Email : info@mrutyunjayeshwaratemple.com
ಜಯ ಮೃತ್ಯುಂಜಯ
ದೇವಗೆ ಪೊಡ ಮಡುವೆ
ಮೃತ್ಯುಂಜಯೇಶಗೆ ನಾ ಮಣಿವೆ
ಜಯ ಜಯ ಜಯ ಜಯ
ಜಯ ಜಯ ಜಯ ಜಯ
ಜಯ ಮೃತ್ಯುಂಜಯಗೆ
ಲೋಕೋದ್ಧಾರಗೆ ಶರಣವೆಂಬೆ
ಭಕ್ತರ ಪೊರೆಯೋ ಎಂದೆಂಬೆ ||ಜಯ||
ದುಃಖವ ನೀಗುತಿರು
ಮನಕೆ ನೆಮ್ಮದಿ ನೀಡುತಿರು ||ಜಯ||
ಸುಗುಣವ ಕೊಡು ಇಂದು
ಮನುಜಗೆ ಸಮರಸವಿರಲೆಂದು ||ಜಯ||
ಐಕ್ಯತೆ ನಮಗಿರಲಿ
ಎಂದಿಗು ಸೌಖ್ಯದ ಬದುಕಿರಲಿ ||ಜಯ||
ಧರ್ಮವು ಹೊಳೆದಿರಲಿ
ನಿತ್ಯವು ಕರ್ಮವು ನೆನಪಿರಲಿ ||ಜಯ||